2014 ಹೋಂಡಾ ಎಸ್‌ಯುವಿಗೆ 'ಸಿಆರ್-ಯು' ಪಟ್ಟಾಭಿಷೇಕ

By Nagaraja

ವರ್ಷಾಂರಂಭದಲ್ಲಿ ನಡೆದ ಡೆಟ್ರಾಯ್ಟ್ ಮೋಟಾರ್ ಶೋದಲ್ಲಿ ಪ್ರದರ್ಶನ ಕಂಡಿದ್ದ ಹೋಂಡಾದ ಅರ್ಬನ್ ಎಸ್‌ಯುವಿ ಕಾನ್ಸೆಪ್ಟ್ ಇದೀಗ ಉತ್ಪಾದಕಾ ವರ್ಷನ್ ಪಡೆದುಕೊಳ್ಳಲು ನಿದ್ಧವಾಗುತ್ತಿದೆ.

ವಾಹನೋದ್ಯಮದ ಕ್ಷಣಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ

ಅಂತೆಯೇ 2014ರಲ್ಲಿ ಹೋಂಡಾ ಅರ್ಬನ್ ಎಸ್‌ಯುವಿ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ. ಸ್ಫೋರ್ಟಿ ಹಾಗೂ ಡೈನಾಮಿಕ್ ವಿನ್ಯಾಸ ಪಡೆದುಕೊಂಡಿರುವ ಹೋಂಡಾ ಎಸ್‌ಯುವಿ ಹೆಚ್ಚು ಸ್ಥಳಾವಕಾಶದ ಜತೆ ಪ್ರೀಮಿಯಂ ಇಂಟಿರಿಯರ್ ವ್ಯವಸ್ಥೆ ಹೊಂದಿರಲಿದೆ.

ನಗರ ಪ್ರದೇಶ ಸೇರಿದಂತೆ ಗುಡ್ಡಗಾಡು ಪ್ರದೇಶಗಳಿಗೂ ಹೊಂದಿಕೆಯಾಗುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಮುಂದಿನ ತಲೆಮಾರಿನ ಹೋಂಡಾ ಎಸ್‌ಯುವಿ, ಜಾಝ್/ಫಿಟ್ ಫ್ಲ್ಯಾಟ್ ಫಾರ್ಮ್‌ನಲ್ಲೇ ನಿರ್ಮಾಣವಾಗಲಿದೆ.

2014 ಹೋಂಡಾ ಎಸ್‌ಯುವಿಗೆ 'ಸಿಆರ್-ಯು' ಪಟ್ಟಾಭಿಷೇಕ

ಪ್ರಸ್ತುತ ಮೆಕ್ಸಿಕೊ ಘಟಕದಲ್ಲಿ ಸಿದ್ಧಗೊಳ್ಳುತ್ತಿರುವ ನೂತನ ಎಸ್‌ಯುವಿ ಹೊಸ ವರ್ಷಕ್ಕೆ ಜಾಗತಿಕ ಮಾರುಕಟ್ಟೆ ಪ್ರವೇಶಿಸಲಿದೆ.

2014 ಹೋಂಡಾ ಎಸ್‌ಯುವಿಗೆ 'ಸಿಆರ್-ಯು' ಪಟ್ಟಾಭಿಷೇಕ

ಏತನ್ಮಧ್ಯೆ ಟೊಕಿಯೋ ಮೋಟಾರ್ ಶೋದಲ್ಲಿ ಹೋಂಡಾ ಅರ್ಬನ್ ಎಸ್‌ಯುವಿ ಸಂಪೂರ್ಣವಾಗಿ ಅನಾವರಣಗೊಳ್ಳುವ ಬಗ್ಗೆ ಮಾಹಿತಿ ಲಭಿಸಿದೆ.

2014 ಹೋಂಡಾ ಎಸ್‌ಯುವಿಗೆ 'ಸಿಆರ್-ಯು' ಪಟ್ಟಾಭಿಷೇಕ

ಹಾಗಿದ್ದರೂ ಈ ಎಲ್ಲದರ ಬಗ್ಗೆ ಕಂಪನಿಯಿಂದ ಅಧಿಕೃತ ಮಾಹಿತಿಗಳು ಇದುವರೆಗೆ ಬಂದಿಲ್ಲ. ಸದ್ಯದಲ್ಲೇ ಈ ಬಗ್ಗೆ ಹೆಚ್ಚಿನ ಮಾಹಿತಿ ದೊರಕಲಿದೆ.

2014 ಹೋಂಡಾ ಎಸ್‌ಯುವಿಗೆ 'ಸಿಆರ್-ಯು' ಪಟ್ಟಾಭಿಷೇಕ

ಅಂದ ಹಾಗೆ ಹೋಂಡಾದಿಂದ ಆಗಮನವಾಗಲಿರುವ ನೂತನ ನಗರ ಎಸ್‌ಯುವಿ, ಹೋಂಡಾ ಸಿಆರ್-ಯು (CR-U) ಎಂಬ ಹೆಸರಿನಿಂದ ಅರಿಯಲ್ಪಡಲಿದೆ.

2014 ಹೋಂಡಾ ಎಸ್‌ಯುವಿಗೆ 'ಸಿಆರ್-ಯು' ಪಟ್ಟಾಭಿಷೇಕ

ಇದು ಹೊರಗಿನ ರಿಯರ್ ವ್ಯೂ ಮಿರರ್, ಪರಿಷ್ಕೃತ ಹೆಡ್‌ಲೈಟ್‌ಗಳಂತಹ ಆಕರ್ಷಕ ಫೀಚರ್‌ಗಳನ್ನು ಹೊಂದಿರಲಿದೆ.

2014 ಹೋಂಡಾ ಎಸ್‌ಯುವಿಗೆ 'ಸಿಆರ್-ಯು' ಪಟ್ಟಾಭಿಷೇಕ

ಇದು ನಿಸ್ಸಾನ್ ಜ್ಯೂಕ್, ಪ್ಯೂಜೆಟ್ 2008 ಮತ್ತು ಫಿಯೆಟ್ 500ಎಕ್ಸ್ ಆವೃತ್ತಿಗಳಿಗೆ ಸ್ಪರ್ಧೆಯನ್ನು ಒಡ್ಡಲಿದೆ.

2014 ಹೋಂಡಾ ಎಸ್‌ಯುವಿಗೆ 'ಸಿಆರ್-ಯು' ಪಟ್ಟಾಭಿಷೇಕ

ನೂತನ ಹೋಂಡಾ ಕಾರು 1.6 ಲೀಟರ್ ಮತ್ತು 1.8 ಲೀಟರ್ ಅರ್ಥ್ ಡ್ರೀಮ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

2014 ಹೋಂಡಾ ಎಸ್‌ಯುವಿಗೆ 'ಸಿಆರ್-ಯು' ಪಟ್ಟಾಭಿಷೇಕ

ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಭಾರತದಲ್ಲಿ ಹೆಚ್ಚೆಚ್ಚು ಹೋಂಡಾ ಕಾರುಗಳ ಅಬ್ಬರವನ್ನು ನೋಡಬಹುದಾಗಿದೆ. ಯಾಕೆಂದರೆ ಹೋಂಡಾ ಮೊಬಿಲಿಯೊ ಎಂಪಿವಿ ಇನ್ನಷ್ಟೇ ಆಗಮನವಾಗಬೇಕಾಗಿದೆ.

Most Read Articles

Kannada
English summary
Honda's Urban SUV concept which was previewed for the first time in Detroit in January 2013, Honda says it combines "a sporty and dynamic SUV profile with a spacious, functional interior".
Story first published: Monday, November 18, 2013, 16:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X