ಎಲೆಕ್ಟ್ರಿಕ್ ಕಾರು ಖರೀದಿಸುವ ಮುನ್ನ ಖಂಡಿತ ಈ 6 ವಿಷಯಗಳು ತಿಳಿದಿರಲಿ...

ಗ್ರಾಹಕರಿಗೆ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಜ್ಞಾನ ಹೆಚ್ಚಿಸುವ ಸಲುವಾಗಿ ಈ ಲೇಖನದಲ್ಲಿ ಕೆಲವು ಪ್ರಮುಖ ವಿಷಯಗಳನ್ನು ತಿಳಿಸಲಾಗಿದೆ. ಒಂದು ವೇಳೆ ಇವಿ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೇ, ಕೆಳಗೆ ತಿಳಿಸಲಾದ ಕೆಲವು ಪ್ರಮುಖ ಅಂಶಗಳನ್ನು ಖಂಡಿತ ತಿಳಿದುಕೊಳ್ಳಲೇಬೇಕು. ಈ ಲೇಖನವು ಎಲೆಕ್ಟ್ರಿಕ್ ಕಾರನ್ನು ಖರೀದಿಸುವ ಮೊದಲು ನಿಮಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒದಗಿಸುತ್ತದೆ.

ಡ್ರೈವಿಂಗ್ ರೇಂಜ್
ಎಲೆಕ್ಟ್ರಿಕ್ ವಾಹನವನ್ನು ಖರೀದಿಸುವಾಗ ಚಾಲನಾ ಶ್ರೇಣಿಯು (ಮೈಲೇಜ್) ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಕಂಪನಿ ಒದಗಿಸಿದ ಡ್ರೈವಿಂಗ್ ರೇಂಜ್ ಅಂಕಿಅಂಶಗಳನ್ನು ನಂಬಿಕೊಳ್ಳಬಾರದು. ದೈನಂದಿನ ಸಂದರ್ಭಗಳಲ್ಲಿ EV ಎಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಕಂಡುಹಿಡಿಯಲು ನಾವು ನಿಜ ಜೀವನದ ವಿಮರ್ಶೆಗಳನ್ನು ಪರಿಶೀಲಿಸಬೇಕು. ಭಾರತೀಯ ರಸ್ತೆಗಳಲ್ಲಿ ಓಡುತ್ತಿರುವ ಹೆಚ್ಚಿನ ಬಜೆಟ್ ಎಲೆಕ್ಟ್ರಿಕ್ ಕಾರುಗಳು ಒಂದೇ ಚಾರ್ಜ್‌ನಲ್ಲಿ ಸರಾಸರಿ 100-150 ಕಿ.ಮೀ ವ್ಯಾಪ್ತಿಯನ್ನು ಹೊಂದಿವೆ.

ಎಲೆಕ್ಟ್ರಿಕ್ ಕಾರು ಖರೀದಿಸುವ ಮುನ್ನ ಖಂಡಿತ ಈ 6 ವಿಷಯಗಳು ತಿಳಿದಿರಲಿ...

ಇದು ದೈನಂದಿನ ಓಡಾಟಕ್ಕೆ ಸಾಕಾಗುತ್ತದೆ. ಮತ್ತೊಂದೆಡೆ ಉನ್ನತ ಶ್ರೇಣಿಯ ಎಲೆಕ್ಟ್ರಿಕ್ ಕಾರುಗಳು ಹೆಚ್ಚಿನ ಶ್ರೇಣಿಯನ್ನು ನೀಡಬಹುದು. ಒಮ್ಮೆ ಚಾರ್ಜ್ ಮಾಡಿದರೆ 400 ಕಿ.ಮೀ. ನಷ್ಟು ಮೈಲೇಜ್ ನೀಡುತ್ತವೆ. ಭಾರತದಲ್ಲಿ ಲಭ್ಯವಿರುವ ಹೆಚ್ಚಿನ ಶ್ರೇಣಿಯನ್ನು ನೀಡುವ ಎಲೆಕ್ಟ್ರಿಕ್ ಕಾರುಗಳನ್ನು ನೋಡುವುದಾದರೆ, ಹ್ಯುಂಡೈ ಕೋನಾ ಒಂದೇ ಚಾರ್ಜ್‌ನಲ್ಲಿ 484 ಕಿ.ಮೀ ವರೆಗೆ ಪ್ರಯಾಣಿಸಬಹುದು, ನಂತರ ಇತ್ತೀಚೆಗೆ ಬಿಡುಗಡೆಯಾದ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಸಿಂಗಲ್ ಚಾರ್ಜ್‌ನಲ್ಲಿ ಸುಮಾರು 437 ಕಿ.ಮೀ ಕ್ರಮಿಸುತ್ತದೆ.

ನಿರ್ವಹಣೆ ವೆಚ್ಚ
ಎಲೆಕ್ಟ್ರಿಕ್ ಕಾರುಗಳ ನಿರ್ವಹಣಾ ವೆಚ್ಚದ ಬಗ್ಗೆ ಮಾತನಾಡುವುದಾದರೆ, ದೀರ್ಘಾವಧಿಯಲ್ಲಿ ನಿರ್ವಹಣೆಗೆ ಎಷ್ಟು ವೆಚ್ಚವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಎಲೆಕ್ಟ್ರಿಕ್ ಕಾರಿನ ಸರಾಸರಿ ನಿರ್ವಹಣೆಯು ಸಾಮಾನ್ಯ IC ಎಂಜಿನ್ ವಾಹನಗಳಿಗಿಂತ ಕಡಿಮೆ ವೆಚ್ಚ ತಗುಲುತ್ತದೆ. ಏಕೆಂದರೆ EV ನಲ್ಲಿ IC ಎಂಜಿನ್ ಕಾರಿಗೆ ಹೋಲಿಸಿದರೆ ಕಡಿಮೆ ಯಾಂತ್ರಿಕ ಭಾಗಗಳಿವೆ. ಆದ್ದರಿಂದ ನೀವು ದೀರ್ಘಾವಧಿಯ EV ನಿರ್ವಹಣೆಯ ಬಗ್ಗೆ ಚಿಂತಿಸಬೇಕಿಲ್ಲ.

ಬೆಲೆ
EV ವಾಹನವು ಒಂದು IC ಎಂಜಿನ್‌ಗಿಂತ ಹೆಚ್ಚು ವೆಚ್ಚವಾದರೂ, ಅದರ ನಿರ್ವಹಣಾ ವೆಚ್ಚದಲ್ಲಿ ಇದನ್ನು ಸರಿದೂಗಿಸಿ ಹೆಚ್ಚು ಲಾಭ ಪಡಿಯಬಹುದು. ಇದು ಇಂಧನ ತುಂಬುವಿಕೆಯ ಮೇಲಿನ ಹಚ್ಚಿನ ವೆಚ್ಚಗಳಿಂದ ನಿಮ್ಮನ್ನು ಉಳಿಸುತ್ತದೆ. ಭವಿಷ್ಯದ ಲಾಭವನ್ನು ಹೆಚ್ಚಿಸಿಕೊಂಡು ಆರಂಭದಲ್ಲಿ ಖರ್ಚು ಮಾಡಬಹುದು ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಟಾಟಾ ಮೋಟಾರ್ಸ್ ಮುಂಚೂಣಿಯಲ್ಲಿದೆ. ಕಂಪನಿಯು ದೇಶದ ಒಟ್ಟು ಇ-ಕಾರ್ ನೋಂದಣಿಗಳಲ್ಲಿ ಶೇ 88.9 ರಷ್ಟು ಪಾಲನ್ನು ಹೊಂದಿದೆ.

ಚಾರ್ಜಿಂಗ್ ವಿಶೇಷಣಗಳು
ಇವಿ ವಾಹನಗಳಲ್ಲಿ ಕೇವಲ ಡ್ರೈವಿಂಗ್ ಶ್ರೇಣಿ ಮಾತ್ರ ಮುಖ್ಯವಲ್ಲ, ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ತೆಗೆದುಕೊಳ್ಳುವ ಸಮಯವೂ ಸಹ EV ಯಲ್ಲಿ ಮುಖ್ಯವಾಗಿರುತ್ತದೆ. ನಿಮ್ಮ ಎಲೆಕ್ಟ್ರಿಕ್ ಕಾರ್ ಹೆಚ್ಚಿನ ಮೈಲೇಜ್ ಏನೋ ನೀಡುತ್ತದೆ ಎಂದುಕೊಳ್ಳಿ ಆದರೆ ಚಾರ್ಜ್ ಮಾಡಲು ಬಹಳ ಸಮಯ ತೆಗೆದುಕೊಂಡರೆ ಆ ವಾಹನದಿಂದ ನೀವು ಸಂತೃಪ್ತಿ ಹೊಂದುವುದಿಲ್ಲ. ಹಾಗಾಗಿ ಸಾಧ್ಯವಾದಷ್ಟು ಬೇಗ 0 ಯಿಂದ ಶೇ100 ರಷ್ಟು ಪೂರ್ಣವಾಗಿ ಚಾರ್ಜ್ ಆಗುವ ಎಲೆಕ್ಟ್ರಿಕ್ ಕಾರನ್ನು ಆಯ್ಕೆಮಾಡಿಕೊಳ್ಳಿ. ಏಕೆಂದರೆ ತುರ್ತು ಸಂದರ್ಭಗಳಲ್ಲಿ ಇದು ಸಹಕಾರಿಯಾಗುತ್ತದೆ.

ಬ್ಯಾಟರಿ ಪ್ರಕಾರ ಮತ್ತು ಖಾತರಿ
ಆಧುನಿಕ ಎಲೆಕ್ಟ್ರಿಕ್ ವಾಹನಗಳು ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ಗಳೊಂದಿಗೆ ಸುಸಜ್ಜಿತವಾಗಿವೆ, ಇದು ಒಟ್ಟಾರೆ ಕಾರ್ಯಕ್ಷಮತೆಯ ದೃಷ್ಟಿಯಿಂದ ಹಗುರ ಮತ್ತು ಪರಿಣಾಮಕಾರಿಯಾಗಿದೆ. ಅಲ್ಲದೇ ಎಲೆಕ್ಟ್ರಿಕ್ ವಾಹನಗಳಲ್ಲಿ ಬ್ಯಾಟರಿಯೇ ಅತ್ಯಂತ ದುಬಾರಿಯಾಗಿದೆ. ಹಾಗಾಗಿ ಬ್ಯಾಟರಿ ಕುರಿತು ಹೆಚ್ಚಾಗಿ ತಿಳಿದುಕೊಳ್ಳಬೇಕು, ವಾಹನದಲ್ಲಿ ಯಾವ ತರಹದ ಬ್ಯಾಟರಿ ಬಳಸಲಾಗಿದೆ ಹಾಗೂ ಅದರ ಬಾಳಿಕೆಯನ್ನು ಖಚಿತಪಡಿಸಿಕೊಳ್ಳಬೇಕು. ಹೆಚ್ಚಾಗಿ ಬ್ರಾಂಡ್‌ಗಳು ತಮ್ಮ ಇವಿ ಬ್ಯಾಟರಿಯಲ್ಲಿ ಎಂಟು ವರ್ಷಗಳ ಅಥವಾ 1.6 ಲಕ್ಷ ಕಿ.ಮೀಗಳ ಓಟದ ವಾರಂಟಿಯನ್ನು ನೀಡುತ್ತವೆ. ಖಂಡಿತವಾಗಿಯು ಈ ಮಾಹಿತಿಯನ್ನು ಒಮ್ಮೆ ಪರಿಶೀಲಿಸಿ ವಾಹನ ಖರೀದಿಸಿ.

ಪವರ್‌ ಟ್ರೇನ್ ಮತ್ತು ಟಾರ್ಕ್
ಮೋಟಾರಿನ ಶಕ್ತಿಯಿಂದ (bhp) ನಿರ್ಧರಿಸುವ ಅದರ ಟಾರ್ಕ್ ಅನ್ನು ಆಧರಿಸಿ EV ಎಷ್ಟು ವೇಗವಾಗಿ ಚಲಿಸುತ್ತದೆ ಎಂಬುದನ್ನು ನೀವು ಅಂದಾಜು ಮಾಡಬಹುದು. ಚಾಲನಾ ಅನುಭವವನ್ನು ಹೆಚ್ಚಿಸಲು ಎಲೆಕ್ಟ್ರಿಕ್ ಕಾರಿನ ಉತ್ತಮ ಪವರ್ ಟ್ರೇನ್ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಉತ್ತಮ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿರುವ ಎಲೆಕ್ಟ್ರಿಕ್ ಕಾರನ್ನು ಖರೀದಿಸಲು ಮರಿಯದಿರಿ. ಇದು ಕಾರಿನ ಪರ್ಫಾಮೆನ್ಸ್ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

Most Read Articles

Kannada
English summary
Before buying an electric car definitely know these 6 important things
Story first published: Friday, January 6, 2023, 18:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X