Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನೀರಿನಲ್ಲಿ ಸಿಲುಕಿದ ಜಾಗ್ವಾರ್, ಮುಂದೇನಾಯ್ತು ನೋಡಿ..!
ಸೆಡಾನ್ ಕಾರುಗಳು ನಿಂತಿರುವ ನೀರಿನ ವಿರುದ್ಧವಾಗಿ ಹೋಗಲು ಸಾಧ್ಯವಿಲ್ಲ ಎನ್ನುವುದು ಮುಂಬೈನ ಪ್ರವಾಹ ಪರಿಸ್ಥಿತಿಯಲ್ಲಿ ಸಾಬೀತಾಗಿದೆ. ರಸ್ತೆಯಲ್ಲಿ ನಿಂತಿರುವ ನೀರಿನಿಂದ ಹೊರಬರಲಾಗದೇ ಜಾಗ್ವಾರ್ ಕಾರು ಸಿಲುಕಿರುವ ಘಟನೆ ನವಿ ಮುಂಬೈನ ಎರೋಲಿಯಲ್ಲಿ ನಡೆದಿದೆ.

ಈ ಕಾರಿನ ಚಾಲಕನು ಹಲವು ಬಾರಿ ಕಾರ್ ಅನ್ನು ಸ್ಟಾರ್ಟ್ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಕಾರು ಒಂದು ಚೂರು ಮುಂದೆ ಚಲಿಸದೇ ಹಾಗೇ ನಿಂತಿದೆ. ಇದೇ ಸಮಯದಲ್ಲಿ ಇದೇ ಮಾರ್ಗದಲ್ಲಿ ಮಹೀಂದ್ರಾ ಬೊಲೆರೊ ಪಿಕ್ ಅಪ್ ಕಾರು ಸಲೀಸಾಗಿ ಹೊರ ಬಂದಿದೆ. ಈ ದೃಶ್ಯವನ್ನು ಸೆರೆಹಿಡಿಯಲಾಗಿದ್ದು, ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಲಾಗಿದೆ. ಒಂದು ಸೆಡಾನ್ ಕಾರಿಗೂ ಹಾಗೂ ಪಿಕ್ ಅಪ್ ಎಸ್‍ಯುವಿಗೂ ಇರುವ ವ್ಯತ್ಯಾಸವನ್ನು ಈ ಘಟನೆಯಿಂದ ತಿಳಿಯಬಹುದು.
ಲಗ್ಷುರಿ ಸೆಡಾನ್ ಹಾಗೂ ಹ್ಯಾಚ್‍ಬ್ಯಾಕ್ ಕಾರುಗಳು ಸುಸ್ಥಿತಿಯಲ್ಲಿರುವ ರಸ್ತೆಗಳಲ್ಲಿ ಸರಾಗವಾಗಿ ಚಲಿಸುತ್ತವೆ. ಕೆಟ್ಟ ರಸ್ತೆಗಳು ಹಾಗೂ ಕಠಿಣ ಪರಿಸ್ಥಿತಿಗಳಲ್ಲಿ ಎಸ್‍ಯುವಿಗಳೇ ಬೇಕಾಗುತ್ತವೆ. ಆದ ಕಾರಣ ಹೆಚ್ಚಿನ ಸಂಖ್ಯೆಯ ಭಾರತೀಯರು ಇತ್ತೀಚಿಗೆ ಎಸ್‍ಯುವಿಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ.

ಐಷಾರಾಮಿ ಕಾರ್ ಆದ ಜಾಗ್ವಾರ್ ಲಗ್ಷುರಿ ಕ್ಯಾಬಿನ್, ಸಮರ್ಥವಾದ ಎಂಜಿನ್, ಆರಾಮದಾಯಕ ಡ್ರೈವಿಂಗ್ ಅನುಭವವನ್ನು ನೀಡಿದರೂ ಆಫ್ ರೋಡ್ ರಸ್ತೆಗಳಲ್ಲಿ ಚಲಿಸುವುದು ಅಷ್ಟು ಸುಲಭವಲ್ಲ. ಈ ರೀತಿಯ ಐಷಾರಾಮಿ ಕಾರುಗಳನ್ನು ನಿಂತಿರುವ ನೀರಿನಲ್ಲಿ ಅಥವಾ ಪ್ರವಾಹ ಪರಿಸ್ಥಿತಿಯಿರುವ ರಸ್ತೆಗಳಲ್ಲಿ ಚಲಾಯಿಸುವುದರಿಂದ ವಾಹನಗಳಿಗೆ ಹಾನಿಯಾಗುವುದು ಖಚಿತ.

ಮಹೀಂದ್ರಾ ಬೊಲೆರೊ ಪಿಕ್ ಅಪ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಈ ವಾಹನವು ಆಫ್ ರೋಡ್ ವಾಹನವಾಗಿರದಿದ್ದರೂ, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಇದರಲ್ಲಿರುವ ಎಂಜಿನ್ ಹೆಚ್ಚಿನ ಪ್ರಮಾಣದ ಟಾರ್ಕ್ ಉತ್ಪಾದಿಸುವುದರಿಂದ ನಿಂತಿರುವ ನೀರಿನಲ್ಲೂ ಸರಾಗವಾಗಿ ಚಲಿಸುತ್ತದೆ.

ಬೊಲೆರೊ ಪಿಕ್ ಅಪ್ ವಾಹನವು ರಫ್ ಅಂಡ್ ಟಫ್ ವಾಹನವಾಗಿದ್ದು, ಯಾವುದೇ ಚಿಂತೆಯಿಲ್ಲದೇ ಎಂತಹ ಕಠಿಣ ಪರಿಸ್ಥಿತಿಗಳಲ್ಲೂ ಸರಾಗವಾಗಿ ಚಲಿಸಬಹುದು. ವಾಹನವು ಎಷ್ಟೇ ಬಲಶಾಲಿಯಾಗಿದ್ದರೂ ನೀರು ನಿಂತಿರುವ ಸ್ಥಳಗಳಲ್ಲಿ ವಾಹನ ಚಲಾಯಿಸದಿರುವುದು ಒಳಿತು.

ವಾಹನದಲ್ಲಿ ಸ್ನಾರ್ಕೆಲ್ ಹಾಗೂ ಸಂಬಂಧಪಟ್ಟ ನೀರಿನ ಬಿಟ್‌ಗಳನ್ನು ಅಳವಡಿಸಿಲ್ಲದಿದ್ದರೆ, ವಾಹನವು ನೀರಿನ ವೇಗವನ್ನು ಹೆಚ್ಚಿಸುತ್ತದೆ. ಕೆಲ ಸಂದರ್ಭಗಳಲ್ಲಿ ನೀರು ಎಂಜಿನ್ ಒಳಕ್ಕೆ ಹೋಗಿ ಎಂಜಿನ್ ಹೈಡ್ರೊ ಲಾಕ್ ಆಗುವ ಸಾಧ್ಯತೆಗಳಿರುತ್ತವೆ.
MOST READ: ಕಾರ್ ಕದ್ದಿದ್ದು ಆಯ್ತು, ಈಗ ಖದೀಮರ ಕಣ್ಣು ಲೊಗೊ ಮೇಲೆ..!

ಜಾಗ್ವಾರ್‍ನಂತಹ ದುಬಾರಿ ಬೆಲೆಯ ಕಾರುಗಳಲ್ಲಿರುವ ಎಂಜಿನ್‍ಗಳು ದೊಡ್ಡ ಟರ್ಬೋಚಾರ್ಜರ್‌ಗಳನ್ನು ಬಳಸಿ ಚಿಕ್ಕ ಎಂಜಿನ್‍ಗಳಿಂದ ಹೆಚ್ಚಿನ ಪವರ್ ಉತ್ಪಾದಿಸುತ್ತವೆ. ಟರ್ಬೊಚಾರ್ಜರ್ ನೀರನ್ನು ಹೀರುವುದರಿಂದ ಕಾರುಗಳು ಮತ್ತಷ್ಟು ಹಾನಿಗೊಳಗಾಗುತ್ತವೆ. ಟರ್ಬೊವನ್ನು ಬದಲಿಸುವುದಕ್ಕೆ ಪರಿಣಿತರ ಅಗತ್ಯವಿದ್ದು, ಹೆಚ್ಚು ಖರ್ಚಾಗುತ್ತದೆ.
MOST READ: ಪೆಟ್ರೋಲ್ ಬಂಕ್‍ನಿಂದ ಹೊರಡುವ ಮುನ್ನ ಎಚ್ಚರ..!

ಬಿಡಿಭಾಗಗಳೂ ಸಹ ದೊರೆಯುವುದಿಲ್ಲ. ದುಬಾರಿ ಕಾರುಗಳಲ್ಲಿರುವ ಫೀಚರ್‍ಗಳು ಹಾಗೂ ಫಂಕ್ಷನ್‍ಗಳು ಸಾಕಷ್ಟು ಎಲೆಕ್ಟ್ರಾನಿಕ್ ಸರ್ಕ್ಯೂಟ್‌ಗಳನ್ನು ಹೊಂದಿರುತ್ತವೆ. ನೀರು ಕಾರುಗಳಲ್ಲಿರುವ ಎಲೆಕ್ಟ್ರಿಕ್ ಸಿಸ್ಟಂಗಳನ್ನು ಹಾನಿಗೊಳಿಸುವುದರ ಜೊತೆಗೆ, ಹಲವಾರು ಫಂಕ್ಷನ್‍ಗಳು ಕಾರ್ಯ ನಿರ್ವಹಿಸದಂತೆ ಮಾಡುತ್ತದೆ.
MOST READ: ಜೆಸಿಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಈ ರೀತಿ ಪ್ರವಾಹದ ನೀರಿನಿಂದ ಹಾನಿಗೊಳಗಾದ ಕಾರುಗಳು ನಂತರ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಗಳಲ್ಲಿ ಕಡಿಮೆ ಬೆಲೆಗೆ ಮಾರಾಟವಾಗುತ್ತವೆ. ನೀರಿನಿಂದ ಒಮ್ಮೆ ಹಾನಿಗೊಳಗಾದ ಕಾರು ಮತ್ತೆ ಅದೇ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ ದುಬಾರಿ ಬೆಲೆಯ ಕಾರ್ ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರೆ ಪರೀಕ್ಷಿಸಿ ಖರೀದಿಸುವುದು ಒಳ್ಳೆಯದು.

ಒಂದು ಚಲಿಸುತ್ತಿರುವ ಕಾರಿನ ಸುತ್ತಲೂ ನೀರು ನಿಂತು, ನೀವು ಸಿಲುಕಿಕೊಂಡಿದ್ದರೆ, ಕಾರನ್ನು ಇರುವ ಸ್ಥಳದಲ್ಲಿ ಬಿಟ್ಟು ಮೊದಲು ಕಾರಿನಿಂದ ಹೊರಬರಲು ಪ್ರಯತ್ನಿಸಿ. ಕಾರು ನೀರಿನಲ್ಲಿ ಸಿಲುಕಿಕೊಂಡರೆ ಹಾಗೂ ಎಂಜಿನ್ ನಿಂತುಹೋದರೆ, ಅದು ಮತ್ತೆ ಪ್ರಾರಂಭವಾಗುವ ಸಾಧ್ಯತೆಗಳು ಕಡಿಮೆ.

ಕಾರಿನ ಒಳಗೆ ಇರುವುದರಿಂದ ನೀರಿನ ಮಟ್ಟ ಏರಿದರೆ ನಿಮ್ಮ ಜೀವಕ್ಕೆ ಅಪಾಯವಾಗುವ ಸಾಧ್ಯತೆಗಳಿರುತ್ತವೆ. ಕಾರಿನ ಡೋರ್‍ಗಳು ಲಾಕ್ ಆಗಿದ್ದರೆ, ಅವುಗಳನ್ನು ತೆಗೆಯಲು ಸಾಧ್ಯವಾಗದಿದ್ದರೆ, ವಿಂಡೊಗಳನ್ನು ಹೊಡೆದು ಹೊರ ಬನ್ನಿ.