ಮಾರುತಿ ಸುಜುಕಿ ಕಾರುಗಳಿಗೆ ಭಾರೀ ಬೇಡಿಕೆ- ಹೊಸ ಕಾರುಗಳಿಗೆ ಕಾಯ್ದು ಕುಳಿತ 1.1 ಲಕ್ಷ ಗ್ರಾಹಕರು..

Written By: Rahul TS

ದೇಶಿಯಾ ವಾಹನ ತಯಾರಕ ಮಾರುತಿ ಸುಜುಕಿ ಸಂಸ್ಥೆಯ ಸ್ವಿಫ್ಟ್, ಬಲೆನೊ, ಡಿಜೈರ್ ಮತ್ತು ವಿಟಾರಾ ಬ್ರೇಝಾ ಕಾರುಗಳಿಗೆ ಭಾರೀ ಬೇಡಿಕೆ ಸೃಷ್ಠಿಯಾಗಿದ್ದು, ಕೆಲವೇ ದಿನಗಳಲ್ಲಿ 1,10,000 ಹೊಸ ಕಾರುಗಳಿಗಾಗಿ ಬುಕ್ಕಿಂಗ್ ಪಡೆಯಲಾಗಿದೆ.

ಮಾರುತಿ ಸುಜುಕಿ ಕಾರುಗಳಿಗೆ ಭಾರಿ ಬೇಡಿಕೆ- ಹೊಸ ಕಾರುಗಳಿಗೆ ಕಾಯ್ದು ಕುಳಿತ 1.1 ಲಕ್ಷ ಗ್ರಾಹಕರು..

ಮಾಹಿತಿಗಳ ಪ್ರಕಾರ ಗುಜರಾತ್‍‍ನಲ್ಲಿರುವ ಮಾರುತಿ ಸುಜುಕಿ ಪ್ಲಾಂಟ್‍‍ನಲ್ಲಿ ಈ ನಾಲ್ಕು ಕಾರುಗಳ ಹೆಚ್ಚಿನ ಉತ್ಪಾದನೆಯನ್ನು ಹೆಚ್ಚಿಸಿದ್ದು, ಶೀಘ್ರದಲ್ಲೇ ಬುಕ್ಕಿಂಗ್ ಮಾಡಿರುವ ಎಲ್ಲಾ ಗ್ರಾಹಕರಿಗೂ ಹೊಸ ಕಾರುಗಳನ್ನು ಪೂರೈಕೆ ಮಾಡುವ ಬಗ್ಗೆ ಮಾರುತಿ ಸುಜುಕಿ ವಿಶ್ವಾಸ ವ್ಯಕ್ತಪಡಿಸಿದೆ.

ಮಾರುತಿ ಸುಜುಕಿ ಕಾರುಗಳಿಗೆ ಭಾರಿ ಬೇಡಿಕೆ- ಹೊಸ ಕಾರುಗಳಿಗೆ ಕಾಯ್ದು ಕುಳಿತ 1.1 ಲಕ್ಷ ಗ್ರಾಹಕರು..

ಹೊಸ ತಲೆಮಾರಿನ ಮಾರುತಿ ಸ್ವಿಫ್ಟ್ ಕಾರು ಇದೇ ವರ್ಷ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಗೊಂಡಿದ್ದು, ಬಿಡುಗಡೆಗೊಂಡ ಕೆಲ ದಿನಗಳಲ್ಲಿಯೇ ದಾಖಲೆಯ ಮಾರಾಟವನ್ನು ಕಂಡಿದೆ. ಬಿಡುಗಡೆಗೊಂಡ 2 ತಿಂಗಳಿನಲ್ಲಿ ಸುಮಾರು 1 ಲಕ್ಷಕ್ಕಿಂತ ಹೆಚ್ಚಿನ ಬುಕ್ಕಿಂಗ್ ಅನ್ನು ಪಡೆದು 2017-18ರಲ್ಲಿ ಹೆಚ್ಚಿ ಮಾರಾಟಗೊಂಡ ಕಾರುಗಳ ಸಾಲಿನಲ್ಲಿ ನಾಲ್ಕನೆಯ ಸ್ಥಾನವನ್ನು ಪಡೆದಿದೆ.

ಮಾರುತಿ ಸುಜುಕಿ ಕಾರುಗಳಿಗೆ ಭಾರಿ ಬೇಡಿಕೆ- ಹೊಸ ಕಾರುಗಳಿಗೆ ಕಾಯ್ದು ಕುಳಿತ 1.1 ಲಕ್ಷ ಗ್ರಾಹಕರು..

ಇನ್ನು ಮಾರುತಿ ಡಿಜೈರ್ ಕಾರುಗಳು ಕಳೆದ ತಿಂಗಳು ಬಿಡುಗಡೆಗೊಂಡಿದ್ದು, ಈಗಲೂ ಕೂಡಾ ತನ್ನ ಸರಣಿಯ ಕಾರುಗಳಲ್ಲಿ ಉತ್ತಮವಾಗಿ ಮಾರಾಟಗೊಳ್ಳುತ್ತಿರುವ ಕಾರಾಗಿದೆ. ಡಿಜೈರ್ ಕಾರು ಬಿಡುಗಡೆಗೊಂಡ ಕೇವಲ 5 ತಿಂಗಳಿನಲ್ಲಿ 1 ಲಕ್ಷ ಯೂನಿಟ್ ಕಾರುಗಳನ್ನು ಮಾರಾಟ ಮಾಡಿವೆ.

ಮಾರುತಿ ಸುಜುಕಿ ಕಾರುಗಳಿಗೆ ಭಾರಿ ಬೇಡಿಕೆ- ಹೊಸ ಕಾರುಗಳಿಗೆ ಕಾಯ್ದು ಕುಳಿತ 1.1 ಲಕ್ಷ ಗ್ರಾಹಕರು..

ಮಾರುತಿ ಸುಜುಕಿ ಸಂಸ್ಥೆಯು 2018ರ ಏಪ್ರಿಲ್ ಒಳಗೆ 1.72 ಲಕ್ಷದ ಕಾರುಗಳನ್ನು ಮಾರಾಟ ಮಾಡಿದ್ದು, ಇನ್ನು ಹ್ಯುಂಡೈ ಸಂಸ್ಥೆಯು 59,744 ಯೂನಿಟ್ ಕಾರುಗಳನ್ನು ಮಾರಾಟ ಮಾಡಿವೆ. ಅಂದರೆ ಮಾರುಕಟ್ಟೆಯಲ್ಲಿ ಹ್ಯುಂಡೈ ಕಾರುಗಳಿಗಿಂತ ಮಾರುತಿ ಸುಜುಕಿ ಕಾರುಗಳಿಗೆ ಬೇಡಿಕೆ ಜಾಸ್ತಿ.

ಮಾರುತಿ ಸುಜುಕಿ ಕಾರುಗಳಿಗೆ ಭಾರಿ ಬೇಡಿಕೆ- ಹೊಸ ಕಾರುಗಳಿಗೆ ಕಾಯ್ದು ಕುಳಿತ 1.1 ಲಕ್ಷ ಗ್ರಾಹಕರು..

ಇದಲ್ಲದೇ ಕೊನೆಯ ಹಣಕಾಸು ವರ್ಷದಲ್ಲಿ ಮಾರುತಿ ವಿಟಾರಾ ಬ್ರೇಝಾ ಕಾರುಗಳು 1.50 ಲಕ್ಷದ ಯೂನಿಟ್ ಮಾರಾಟಗೊಂಡಿದ್ದು, ಈ ವರ್ಷವು ಕೂಡ ಇದೇ ರೀತಿಯ ಮಾರಾಟವನ್ನು ಮಾಡುವ ಯೋಜನೆಯಲ್ಲಿದೆ.

ಮಾರುತಿ ಸುಜುಕಿ ಕಾರುಗಳಿಗೆ ಭಾರಿ ಬೇಡಿಕೆ- ಹೊಸ ಕಾರುಗಳಿಗೆ ಕಾಯ್ದು ಕುಳಿತ 1.1 ಲಕ್ಷ ಗ್ರಾಹಕರು..

ಬಲೆನೊ ಕಾರುಗಳು ಕೂಡಾ ವಿಟಾರ ಬ್ರೇಝಾ ಕಾರುಗಳಂತೆಯೆ ಮಾರಾಟವನ್ನು ಕಂಡಿದ್ದು, ಮಾರುತಿ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಮಾರಾಟಗೊಳ್ಳುತ್ತಿರುವ ಕಾರುಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿ ನಿಂತಿದೆ ಎನ್ನಲಾಗಿದೆ.

ಮಾರುತಿ ಸುಜುಕಿ ಕಾರುಗಳಿಗೆ ಭಾರಿ ಬೇಡಿಕೆ- ಹೊಸ ಕಾರುಗಳಿಗೆ ಕಾಯ್ದು ಕುಳಿತ 1.1 ಲಕ್ಷ ಗ್ರಾಹಕರು..

ಮಾರುತಿ ಸುಜುಕಿ ಸಂಸ್ಥೆಯು ಪ್ರಸ್ತುತ ಒಂದು ಪ್ಲಾಂಟ್‍‍ನಲ್ಲಿ ಮಾತ್ರ ತಮ್ಮ ಕಾರುಗಳನ್ನು ತಯಾರಿಸುತ್ತಿದ್ದು, ವರ್ಷದ ಕೊನೆಯ ವೇಳೆಗೆ 2.5 ಲಕ್ಷ ಯೂನಿಟ್ ಕಾರುಗಳನ್ನು ತಯಾರಿಸುವ ಯೋಜನೆಯಲ್ಲಿದೆ. ಇದಲ್ಲದೆ ಸಂಸ್ಥೆಯು ಗುಜರಾತ್‍‍ನಲ್ಲಿರುವ ಪ್ಲಾಂಟ್‍‍ನಲ್ಲಿ ಇನ್ನೆರಡು ಲೈನ್‍‍ಗಳನ್ನು ಸೇರಿಸಲಿದ್ದು 2020ರ ವೇಳೆಗೆ 7.5 ಲಕ್ಷ ಯೂನಿಟ್ ಕಾರುಗಳನ್ನು ತಯಾರಿಸುವ ಯೋಜನೆಯಲ್ಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಕಾರ್ ಡ್ರೈವಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ..

ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಮಾಡುವ ಮುನ್ನ ಇತ್ತ ನೋಡಿ...

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದಲೇ ಟ್ರೋಲ್ ಆದ ಯುವಕ..

ಭಾರತದಲ್ಲಿ ನಡೆದ ಭೀಕರ 10 ರೈಲು ದುರಂತಗಳಿವು...

ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ...

Read more on maruti suzuki swift sedan
English summary
Maruti Cars In High Demand — 1.1 Lakh Customers Waiting For Swift, Baleno, Dzire & Vitara Brezza.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark